ನಿಮ್ಮ iPhoneನಲ್ಲಿ Wi-Fi ಆನ್ ಮಾಡಿ

ಸೆಟ್ಟಿಂಗ್ಸ್ ಆ್ಯಪ್‌  > Wi-Fi ಎಂಬಲ್ಲಿಗೆ ಹೋಗಿ, ನಂತರ Wi-Fi ಆನ್ ಮಾಡಿ.

ನೆಟ್‌ವರ್ಕ್‌ಗೆ ಸೇರಲು, ಈ ಕೆಳಗಿನವುಗಳಲ್ಲಿ ಒಂದನ್ನು ಟ್ಯಾಪ್ ಮಾಡಿ:

  • ನೆಟ್‌ವರ್ಕ್: ಅಗತ್ಯವಿದ್ದಲ್ಲಿ ಪಾಸ್‌ವರ್ಡ್ ಅನ್ನು ನಮೂದಿಸಿ.

  • ಇತರ: ಮರೆಮಾಡಿದ ನೆಟ್‌ವರ್ಕ್‌ಗೆ ಸೇರಿಕೊಳ್ಳಿ. ಮರೆಮಾಡಿದ ನೆಟ್‌ವರ್ಕ್‌ನ ಹೆಸರು, ಭದ್ರತಾ ಪ್ರಕಾರ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

ಸ್ಕ್ರೀನ್‌ನ ಮೇಲ್ಭಾಗದಲ್ಲಿ Wi-Fi ಐಕಾನ್ ಕಾಣಿಸಿಕೊಂಡರೆ, Wi-Fi ನೆಟ್‌ವರ್ಕ್‌ಗೆ iPhone ಕನೆಕ್ಟ್ ಆಗಿದೆ ಎಂದರ್ಥ. (ಇದನ್ನು ಪರಿಶೀಲಿಸುವುದಕ್ಕಾಗಿ, ವೆಬ್ ಪುಟವನ್ನು ವೀಕ್ಷಿಸಲು Safari ಅನ್ನು ತೆರೆಯಿರಿ.) ನೀವು ಅದೇ ಸ್ಥಳಕ್ಕೆ ಹಿಂತಿರುಗಿದಾಗ iPhone ಮತ್ತೆ ಕನೆಕ್ಟ್ ಆಗುತ್ತದೆ.