Apple Intelligence ಅನ್ನು ಆನ್ ಮಾಡುವುದು
Apple Intelligence ಆಫ್ ಆಗಿದ್ದರೆ, ನೀವು ಅದನ್ನು ಆನ್ ಮಾಡಬಹುದು.
ಸೆಟ್ಟಿಂಗ್ಸ್
> Apple Intelligence ಮತ್ತು Siri ಎಂಬಲ್ಲಿಗೆ ಹೋಗಿ.
ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:
Apple Intelligence ಪಕ್ಕದಲ್ಲಿರುವ ಬಟನ್ ಅನ್ನು ಟ್ಯಾಪ್ ಮಾಡಿ.
Apple Intelligence ಅನ್ನು ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ನಿಮಗೆ ಕಾಣಿಸುವ ಆಯ್ಕೆಯು ನೀವು ಹೊಂದಿರುವ iOS ಆವೃತ್ತಿ ಮತ್ತು ಈ ಹಿಂದೆ Apple Intelligence ಅನ್ನು ಸೆಟಪ್ ಮಾಡಿರುವುದರ ಮೇಲೆ ಆಧರಿಸಿದೆ.
ಗಮನಿಸಿ: ನಿಮ್ಮ ಸಾಧನ, ಭಾಷೆ ಮತ್ತು ಪ್ರದೇಶದಲ್ಲಿ Apple Intelligence ಲಭ್ಯವಿದೆಯೇ ಅಥವಾ ಇಲ್ಲವೇ ಎಂದು ನೋಡಲು, Apple Intelligence ಅನ್ನು ಪಡೆಯುವುದು ಹೇಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.